Rakshak Bullet Instagram – ನನ್ನ ತಂದೆ ಹೆಸರಾಂತ ಚಿತ್ರನಟ, ನಿರ್ಮಾಪಕ ದಿವಂಗತ ಶ್ರೀ ಬುಲೆಟ್ ಪ್ರಕಾಶ್ ರವರು. ಅವರ ನಟನೆಯ ಮೊದಲನೆ ಚಿತ್ರ ಶಾಂತಿ ಕ್ರಾಂತಿ. ಆ ಚಿತ್ರದಲ್ಲಿ ನನ್ನ ತಂದೆಯವರು ನೂರಾರು ಜನ ವಿಧ್ಯರ್ಥಿಗಳಲ್ಲಿ ಅವರೊಬ್ಬರಾಗಿ ಚಿತ್ರರಂಗದ ಪ್ರಯಾಣ ಪ್ರಾರಂಭಿಸಿರುತ್ತಾರೆ. ಇಲ್ಲಿಯವರೆಗೂ ಸುಮಾರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿ ತಮ್ಮೆಲ್ಲರನ್ನು ರಂಜಿಸಿ ತಮ್ಮೆಲ್ಲರ ಪ್ರೀತಿಗೆ ಪಾತ್ರರಾಗಿರುತ್ತಾರೆ. ನನ್ನ ತಂದೆಯ ಕೊನೆಯ ಚಿತ್ರ “ಮೆಹಬೂಬ”. ಹಿಂದಿನ ಬಿಗ್‌ಬಾಸ್ ವಿಜೇತರಾಗಿದ್ದ ಶ್ರೀ ಶಶಿ (ಪ್ರಗತಿಪರ ರೈತ) ಅವರು ಚಿತ್ರದ ನಾಯಕನಾಗಿ ನಟಿಸಿರುವ ಚಿತ್ರದ ಟೀಸರ್ ನಾಳೆ ಬಿಡುಗಡೆಯಾಗಲಿದೆ, ಚಿತ್ರದ ನಿರ್ದೇಶಕರು, ನಿರ್ಮಾಪಕರು, ನಾಯಕ, ನಾಯಕಿ, ಸಂಗೀತ ನಿರ್ದೇಶಕರು ಹಾಗೂ ಎಲ್ಲಾ ಕಲಾವಿದರು ಮತ್ತು ತಂತ್ರಜ್ಞರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಈ ಚಿತ್ರ ಅತ್ಯಂತ ಯಶಸ್ವಿಯಾಗಲಿ ಎಂದು ಆ ದೇವರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ. ದಯವಿಟ್ಟು ಎಲ್ಲಾ ಕಲಾಭಿಮಾನಿಗಳು ಈ ಚಿತ್ರ ಬಿಡುಗಡೆಯಾದ ಮೇಲೆ ನಿಮ್ಮ ಹತ್ತಿರದ ಚಿತ್ರಮಂದಿದಲ್ಲಿ ವೀಕ್ಷಿಸಿ, ಇಡಿ ಚಿತ್ರ ತಂಡಕ್ಕೆ ನೀವೆಲ್ಲರೂ ಹರಸಿ ಹಾರೈಸಬೇಕೆಂದು ವಿನಂತಿ ಮಾಡುತ್ತೇನೆ. 🙏❤️✨️
Atb my brother @shashi.official | Posted on 22/Feb/2024 18:32:12