Anu Prabhakar Instagram – ಇಂಟರ್‌ನ್ಯಾಷನಲ್ ಆರ್ಟ್ಸ್ ಅಂಡ್ ಕಲ್ಚರಲ್ ಫೌಂಡೇಶನ್ ಸಂಸ್ಥೆಯು ದಶಕಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಾರತದಾದ್ಯಂತ ಹಮ್ಮಿಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು 2015ರಲ್ಲಿ ವಿಶ್ವದಲ್ಲಿ ಮೊಟ್ಟಮೊದಲ ಅಂತರಾಷ್ಟ್ರೀಯ ಮಟ್ಟದ ಮಂಗಳಮುಖಿಯರ ಕಲಾ ಉತ್ಸವವನ್ನು ಏರ್ಪಡಿಸಿತ್ತು.
ಖ್ಯಾತ ಛಾಯಾಗ್ರಾಹಕ ಹಾಗೂ ಇಂಟರ್‌ನ್ಯಾಷನಲ್ ಆರ್ಟ್ಸ್ ಅಂಡ್ ಕಲ್ಚರಲ್ ಫೌಂಡೇಶನ್ ಸಂಸ್ಥೆಯ ನಿರ್ದೇಶಕರಾದ ಶ್ರೀವತ್ಸ ಶಾಂಡಿಲ್ಯ ಅವರ ನೇತೃತ್ವದಲ್ಲಿ ” ಕಲಾ ಮಂಗಳ ಉತ್ಸವ ” ಶೀರ್ಷಿಕೆ ಅಡಿಯಲ್ಲಿ ಐದನೇ ಆವೃತ್ತಿಯನ್ನು ತೃತೀಯ ಲಿಂಗಿಯರ ಭರತನಾಟ್ಯ ಶೈಲಿಯ ಶಾಸ್ತ್ರೀಯ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ
2024ರ ಮಾರ್ಚ್ 31ರ ಭಾನುವಾರ ಸಂಜೆ 5:೦೦ ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದ 14ನೇ ಅಡ್ಡರಸ್ತೆಯಲ್ಲಿರುವ ಸೇವಾ ಸದನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಚೆನ್ನೈ ಮೂಲದ ಗುರುಗಳಾದ ಷಣ್ಮುಗ ಸುಂದರಂ ಶಿಷ್ಯಂದಿರಾದ ವೈಷ್ಣವಿ, ಸೆಲ್ವಿ ಸಂತೋಷಮ್ , ರೇಖಾ, ರೋಸ್, ರೋಮನ್, ಕಾರ್ತಿ, ಇವರುಗಳು ಭರತನಾಟ್ಯ ಶೈಲಿಯಲ್ಲಿ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ .
ಈ ತೃತೀಯ ಲಿಂಗ ಕಲಾವಿದರಗಳು ತಮ್ಮ ದಿನಚರಿಯಲ್ಲಿ ಆಟೋರಿಕ್ಷಾ ಚಾಲಕರು, ಐ.ಟಿ. ಉದ್ಯೋಗಿಗಳು, ಫಿಜಿಯೋಥೆರಪಿಸ್ಟ್ ಹಾಗೂ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಅನ್ನು ಮಾಡುವವರಾಗಿದ್ದಾರೆ. ವೃತ್ತಿಯ ಜತೆಗೇ ಕಲಾ ಆಸಕ್ತಿಯನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ. ತಮ್ಮ ಈ ಕಲಾ ಆಸಕ್ತಿಯನ್ನು ಮುಂದುವರಿಸಲು ಈ ಕಾರ್ಯಕ್ರಮದಿಂದ ಪ್ರೇರೇಪಣೆ ಆಗಲಿ ಅಂದು ಭಾವಿಸಿ, ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಕರ್ನಾಟಕದ ಖ್ಯಾತ ಕನ್ನಡ ಚಿತ್ರ ನಟಿ ಶ್ರೀಮತಿ ಅನು ಪ್ರಭಾಕರ್ ಮುಖರ್ಜಿ, ಅಂತಾರಾಷ್ಟ್ರೀಯ ನೃತ್ಯಗಾರ್ತಿ ಹಾಗೂ ಚಲನಚಿತ್ರ ನಟಿ ಲಕ್ಷ್ಮೀ ಗೋಪಾಲಸ್ವಾಮಿ, ಅಂತಾರಾಷ್ಟ್ರೀಯ ನೃತ್ಯಪಟು, ಕರ್ನಾಟಕ ಕಲಾಶ್ರೀ ಶ್ರೀ ಸತ್ಯನಾರಾಯಣರಾಜು ಭಾಗವಹಿಸುತ್ತಿದ್ದಾರೆ. | Posted on 29/Mar/2024 00:41:27