Dhananjay

Dhananjay Instagram – ಒಂದು ಕಡೆ ಸಿನಿಮಾ ಅಪ್ಲೋಡ್‌ ಆಗೋದರಲ್ಲಿದೆ. ಬುಕ್‌ ಮೈ ಶೋದಲ್ಲಿ ಬುಕಿಂಗ್‌ ಇನ್ನೇನು ಓಪನ್‌ ಆಗುತ್ತೆ. ಕೋಟಿ ಬಿಡುಗಡೆ ಆಗೋದಕ್ಕೆ ಇನ್ನು ನಾಲ್ಕೇ ದಿನ ಬಾಕಿ. ಬರೆದಿದ್ದನ್ನು, ಶೂಟಿಂಗ್‌ ಮಾಡಿದ್ದನ್ನು ತೋರಿಸುವ ಮೊದಲು ಆಗಬಹುದಾದ, ಆಗಲೇಬೇಕಾದ ನರ್ವಸ್‌ ನೆಸ್‌ ಒಂಥರಾ ಜ್ವರದ ಥರ ಆವರಿಸಿಕೊಂಡಿದೆ. ನಿದ್ದೆ ಬರುತ್ತಿಲ್ಲ. ಊಟ ಸೇರುತ್ತಿಲ್ಲ. ಇಂಡಿಯಾ ಪಾಕಿಸ್ತಾನ್‌ ಕ್ರಿಕೆಟ್‌ ಮ್ಯಾಚ್‌ ಕೂಡಾ ಮರೆತು ಹೋಗಿದೆ. ಆಲ್ಮೋಸ್ಟ್‌ ಹುಚ್ಚು ಹಿಡಿದ ಪರಿಸ್ಥಿತಿ ನಿಚ್ಛಳವಾಗಿದೆಯಾದರೂ ಇದು ಒಂಥರಾ ಚೆನ್ನಾಗಿದೆ!

ಇದರ ನಡುವೆ ಕೋಟಿ ಟ್ರೇಲರ್‌ ನೋಡಿ ಖುಷಿಯಾಯ್ತು ಅಂತ ಸುಮಾರು ಜನ ಕಾಲ್‌ ಮಾಡಿದ್ದಾರೆ. ಟ್ರೇಲರನ್ನು ಇಲ್ಲಿಯ ತನಕ ನೋಡಿದ ಹದಿನೇಳೂ ಲಕ್ಷ ಜನ ಥಿಯೇಟರಿಗೆ ಬಂದುಬಿಟ್ಟರೆ ಮಳೆಗಾಲ ಚೆನ್ನಾಗಿರುತ್ತದೆ ಎಂದು ಕನಸು ಕಾಣುತ್ತಾ ಈ ಪೋಸ್ಟ್‌ 😊

#Kotee #KoteeMovie
#KoteeMusicOnSaregama
#KoteeOnJune14 | Posted on 09/Jun/2024 19:39:08

Dhananjay
Dhananjay

Check out the latest gallery of Dhananjay