Dhananjay Instagram – ಮನೆ ಮುಂದೆ ಇರೋ ಮೆಟ್ಟಿಲು ನೋಡಿದರೆ ಏನೋ ಒಂಥರಾ ಖುಷಿ. ಈಗಲೂ ಊರಿಗೆ ಹೋದರೆ ಈ ಥರ ಮೆಟ್ಟಿಲ ಮೇಲೆ ಮನೆಯೋರೆಲ್ಲಾ ಕುಳಿತು ಮಾತಾಡೋದಿದೆ. ನಗೋದಿದೆ. ಅಕ್ಕ, ತಂಗಿ, ಆಯಿ, ಮಗನ ನಡುವೆ ಸುಮಾರು ಒಳ್ಳೆಯ ಕ್ಷಣಗಳು ಈ ಥರಾ ಮಟ್ಟಿಲ ಮೇಲೆ ನಡೆದಿದೆ.
ಈ ಮನೆ ನೋಡಿದ ದಿನಾನೇ ಇಲ್ಲೊಂದೆರಡು ಶಾಟ್ ತೆಗೀಲೇಬೇಕು ಅಂತ ಫಿಕ್ಸ್ ಆಗಿಬಿಟ್ಟಿದ್ದೆ. ಈ ಮೆಟ್ಟಿಲ ಮೇಲೆ ಕೂತು ಡಾಲಿ ಮೊದ್ಲನೇ ಸಲ ಜಡೆ ಹಾಕೋದನ್ನ ನೋಡೋದಕ್ಕೆ ಚೆನ್ನಾಗಿತ್ತು. ತಾರಾ ಅಂತೂ ತುಂಬಾ ಕ್ಯೂಟ್. ತನುಜಾ ಮತ್ತು ಪೃಥ್ವಿ ಯಾವ ಆಂಗಲ್ಲಿನಲ್ಲಿ ನೋಡಿದ್ರೂ ನಟರ ಥರ ಇಲ್ಲ. ಥೇಟ್ ತಂಗಿ ಮತ್ತು ತಮ್ಮನ ಥರಾನೇ ಇದಾರೆ.
ಹೀಗೆ ಕೋಟಿ ಮತ್ತು ಮನೆಯೋರು ತುಂಬಾ ಖುಷಿಯಾಗಿದ್ದ ಒಂದು ಸಂಜೆ ಇದು.
ಕೋಟಿ, ಜೂನ್ ೧೪ಕ್ಕೆ
#ಕೋಟಿ #KoteeMovie #KoteeMusicOnSaregama #KoteeOnJune14th | Posted on 25/May/2024 17:54:18