Dhananjay Instagram – ಕಲ್ಪನೆಯಲ್ಲಿ ಹುಟ್ಟಿಕೊಂಡ ಸುಳ್ಳು ಪಾತ್ರವೊಂದನ್ನು ಒಬ್ಬ ನಟ ಸತ್ಯವಾಗಿಸಬೇಕು. ಮಾತಾಡಬೇಕಾದಲ್ಲಿ ಸುಮ್ಮನಿದ್ದು, ಸುಮ್ಮನಿರಬೇಕಾದಲ್ಲಿ ಕಣ್ಣಲ್ಲೇ ಮಾತಾಡಿ, ನಡೆದಾಡುವುದರಲ್ಲೇ ಪಾತ್ರದ ತಳಮಳ ಹೇಳಿ ಕೋಟಿ ಸಿನಿಮಾದಲ್ಲಿ ಇಂಥದ್ದೊಂದು ಮ್ಯಾಜಿಕ್ ಮಾಡಿದ್ದಾರೆ ಧನಂಜಯ. ಎಲೆವೇಷನ್ ಸೀನ್ ಇಲ್ಲದೇ ಟಾಕೀಸಲ್ಲಿ ಓಡುವ ಸಿನಿಮಾ ಇಲ್ಲ ಎನ್ನುವ ಜಗತ್ತಿನಲ್ಲಿ ಅಬ್ಬರವಿಲ್ಲದ ಆದರೆ ತುಂಬಾ ಇಂಟೆನ್ಸ್ ಆಗಿರುವ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸುವುದು ಕಷ್ಟ. ಧನಂಜಯ ಕೋಟಿ ಸಿನಿಮಾದಲ್ಲಿ ಇದನ್ನು ಮಾಡಿ ತೋರಿಸಿದ್ದಾರೆ.
ಮನೆ ಮಗ, ರೌಡಿ, ಪ್ರೇಮಿ, ಸೈಕೋ, ಆಟೋ ಡ್ರೈವರ್, ಆಫೀಸರ್ ಹೀಗೆ ಹತ್ತಾರು ಪಾತ್ರಗಳು. ನಡನಡುವೆ ಸಿನಿಮಾ ನಿರ್ಮಾಣ. ಹಾಡುಗಳ ಬರವಣಿಗೆ. ಕನ್ನಡ ನೋಡಿದ ಒಬ್ಬ ಸೂಕ್ಷ್ಮ ನಟನ ಸಿನಿಮಾ ಪ್ರಯಾಣಕ್ಕೆ ಇಂದಿಗೆ ಹನ್ನೊಂದು ವರ್ಷ.
ಅಭಿನಂದನೆಗಳು ಡಾಲಿ ಧನಂಜಯ!
ಕೋಟಿ ಜೂನ್ ೧೪ಕ್ಕೆ.
Kotee in cinemas on June 14
#ಕೋಟಿ #KoteeMovie
#KoteeMusicOnSaregama
#KoteeOnJune14th | Posted on 31/May/2024 16:07:43