Dhananjay

Dhananjay Instagram – ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ಟೀವಿ ಪ್ರೊಮೊ ಶೂಟಿಂಗ್. ಸನ್ನಿವೇಶವೊಂದಕ್ಕೆ ಅರುಣ್‌ ಮಾಡಿದ ಲೈಟಿಂಗ್‌ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಯಾವತ್ತಾದರೂ ಸಿನಿಮಾ ಮಾಡಿದರೆ ನೀವೇ ಸಿನಿಮಟೋಗ್ರಫರ್‌ ಎಂದು ಆವತ್ತು ಮಾತಾಡಿಕೊಂಡಿದ್ದೆವು. ಸೀರಿಯಸ್ಸಾಗಿ ಆದ ಮಾತುಕತೆ ಏನಲ್ಲ ಅದು. ಕಾರಣವೇ ಇಲ್ಲದೇ ನಾವೊಂದಿಷ್ಟು ಜನ ಕಾಣುತ್ತಿದ್ದ ಹುಚ್ಚು ಕನಸು ಅದು. ‌

ಅರುಣ್‌ ಯಾವ ಜನ್ಮದಲ್ಲಿ ನನ್ನ ತಮ್ಮನೋ, ಇನ್ಯಾವ ಜನ್ಮದಲ್ಲಿ ಅಣ್ಣನೋ ಗೊತ್ತಿಲ್ಲ. ಹಗಲು ರಾತ್ರಿ ಜೊತೆಗೆ ನಿಂತಿದ್ದಾರೆ. ನಿದ್ದೆ, ಊಟ, ಆರೋಗ್ಯ ಮರೆತು ಕನಸು ಕಂಡಿದ್ದಾರೆ. ರೇಗಿದಾಗ ರೇಗಿಸಿಕೊಂಡಿದ್ದಾರೆ. ಪ್ರೀತಿಯ ಮಾತಾಡಿದಾಗ ಸಂಕೋಚದಿಂದ ಔಟ್‌ ಆಫ್‌ ಫೋಕಸ್‌ ಆಗಿದ್ದಾರೆ. ವಿಶೇಷವೆಂದರೆ ಶ್ರಮ, ಶ್ರದ್ಧೆ ಮತ್ತು ಸಿನಿಮಾ ಪ್ರೀತಿಯ ವಿಷಯದಲ್ಲಿ ಯಾವತ್ತೂ ಫೋಕಸ್‌ ಸಮಸ್ಯೆ ಆಗಿಲ್ಲ!

ಕೋಟಿ ಸಿನಿಮಾದಲ್ಲಿ ಒಂದಿಷ್ಟು ಒಳ್ಳೆಯ ಫ್ರೇಮುಗಳಿದ್ದರೆ, ಲೈಟಿಂಗ್‌ ಚೆನ್ನಾಗಿದ್ದರೆ, ಕ್ಯಾಮರಾ ಮೂವ್‌ಮೆಂಟ್‌ ಇಂಟರೆಸ್ಟಿಂಗ್‌ ಆಗಿದ್ದರೆ ಯಾರನ್ನು ಮೆಚ್ಚಿಕೊಳ್ಳಬೇಕು ಮತ್ತು ಯಾರಿಗೆ ಅಭಿನಂದನೆ ಹೇಳಬೇಕು ಅನ್ನುವುದಕ್ಕೆ ಉತ್ತರ ಇಲ್ಲಿದೆ.

ಅದು ಅರುಣ್!‌

ಕೋಟಿ, ಜೂನ್‌ ೧೪ಕ್ಕೆ

#ಕೋಟಿ #KoteeMovie
#KoteeMusicOnSaregama
#KoteeOnJune14th | Posted on 30/May/2024 11:18:25

Dhananjay
Dhananjay

Check out the latest gallery of Dhananjay