Dhananjay

Dhananjay Instagram – ಸುಮಾರು ವರ್ಷಗಳ ಹಿಂದಿನ ಮಾತು. ವಿಜಯ ಕರ್ನಾಟಕ ಶುರು ಆಗುವುದಕ್ಕೆ ಎರಡು ತಿಂಗಳು ಮೊದಲು ಕಲಾಸಿಪಾಳ್ಯದ ಪಾಪ್ಯುಲರ್‌ ಆಟೋಮೊಬೈಲ್ಸ್‌ನ ಮೇಲಿದ್ದ ಆಫೀಸಿಗೆ ನಾನು ಮತ್ತು ಪ್ರತಾಪ ಸಿಂಹ ಒಂದೇ ದಿನ ಕೆಲಸಕ್ಕೆ ಸೇರಿಕೊಂಡಿದ್ದೆವು. ಇಬ್ಬರಿಗೂ ಉಪಸಂಪಾದಕರ ಕೆಲಸ. ಇದಾಗಿ ಕೆಲವು ವರುಷಗಳ ನಂತರ ಇಬ್ಬರೂ ಪತ್ರಿಕೋದ್ಯಮ ಬಿಟ್ಟೆವು. ನನ್ನ ದಾರಿ ಬೇರೆ ಆಯಿತು. ಪ್ರತಾಪ್‌ ದಾರಿಯೂ ಬೇರೆಯಾಯಿತು.

ಹಾಗೆ ಬೇರೆ ಬೇರೆ ಜಗತ್ತಲ್ಲಿದ್ದವರು ಮತ್ತೆ ಸಿಕ್ಕಿದ್ದು ಕನ್ನಡದ ಕೋಟ್ಯಧಿಪತಿಯ ವಿಶೇಷ ಸಂಚಿಕೆಗಾಗಿ. ಅವರೂ ಅಪ್ಪುವನ್ನು ಸಿಕ್ಕಾಪಟ್ಟೆ ಮೆಚ್ಚಿಕೊಳ್ಳುತ್ತಿದ್ದ ವ್ಯಕ್ತಿ. ಆ ದಿನದ ಸ್ಪೆಷಲ್‌ ಎಪಿಸೋಡ್‌ ಶೂಟಿಂಗ್‌ ಮಾಡುವಾಗ ಹಳೆಯದೆಲ್ಲಾ ನೆನಪಾಗಿತ್ತು. ಮತ್ತೆ ಮತ್ತೆ ಸಿಗುವ ಮಾತುಕತೆ ಆಗಿತ್ತಾದರೂ ಪುನಃ ಭೇಟಿ ಸಾಧ್ಯವಾಗಲೇ ಇಲ್ಲ.

ಮೈಸೂರಲ್ಲಿ ʼಕೋಟಿʼ ಶೂಟಿಂಗ್‌ ಮಾಡುವಾಗ ಫೋನಲ್ಲಿ ಮಾತಾಡೋದಕ್ಕೆ ಮಾತ್ರ ಸಾಧ್ಯವಾಗಿತ್ತು. ಈಗ ಸಿನಿಮಾ ಬಿಡುಗಡೆ ಆಗಿದೆ. ಹಳೆಯ ಗೆಳಯನಿಗೆ ಸಿನಿಮಾ ತೋರಿಸುವುದಕ್ಕಾಗಿ ನಾಳೆ ಮೈಸೂರಿನಲ್ಲೊಂದು ಪ್ರದರ್ಶನ. ನೆನಪುಗಳ ಜೊತೆ ಏನೋ ಒಂಥರಾ ಖುಷಿ.

ಡಿ ಆರ್‌ ಸಿ ಯ ಸಂಜೆ ಪ್ರದರ್ಶನದಲ್ಲಿ ಪ್ರತಾಪ್‌ ಸಿಂಹ ಸ್ಪೆಷಲ್‌ ಗೆಸ್ಟ್.‌ ಕೋಟಿ ತಂಡವೂ ಜೊತೆಗಿರುತ್ತದೆ.

#kotee
#koteemovie | Posted on 19/Jun/2024 20:28:22

Dhananjay
Dhananjay

Check out the latest gallery of Dhananjay