Upendra

Upendra Instagram – ಉತ್ತಮ ಪ್ರಜಾಕೀಯ ಪಕ್ಷವು ಕ್ಯಾಶ್ ಲೆಸ್ , ನಾಯಕರಿಲ್ಲದ & ಮತದಾರರ ಪಕ್ಷ

ಪ್ರಜಾಕೀಯದಲ್ಲಿ ಕಾರ್ಯಕರ್ತರು, ಹುದ್ದೆ-ಪದವಿಗಳು, ಸಮಿತಿ, ಸಂಘಟನೆ, ಪ್ರತಿಭಟನೆ ಮುಂತಾದವುಗಳಿಗೆ ಖಂಡಿತಾ ಅವಕಾಶವಿಲ್ಲ.

ಪ್ರಜಾಕೀಯದವರು ಎಂದು ಹೇಳಿಕೊಂಡು ಅದಕ್ಕೆ ಅನುಗುಣವಾಗುವಂತಹ ಬೇರೆ ಹೆಸರಿನಲ್ಲಿ ಸಂಘಟನೆ, ಸಮಾಜಸೇವೆ, ಸಮಿತಿ, ಟ್ರಸ್ಟ್ ಮುಂತಾದವುಗಳನ್ನು ಮಾಡಿ ಪ್ರಜಾಕೀಯವನ್ನು ರಾಜಕೀಯ ಮಾಡುವ ವ್ಯಕ್ತಿಗಳಿಗೂ ಮತ್ತು ಉತ್ತಮ ಪ್ರಜಾಕೀಯ ಪಕ್ಷಕ್ಕೂ ಯಾವುದೇ ಸಂಬಂಧವಿರುವುದಿಲ್ಲ.. ಉತ್ತಮ ಪ್ರಜಾಕೀಯ ಪಕ್ಷಕ್ಕೆ ವಿರುದ್ಧವಾಗಿ ಪಕ್ಷ ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಪ್ರಜಾಕೀಯದ ವೇದಿಕೆಗಳಲ್ಲಿ ಭಾಗವಹಿಸುವಿಕೆಯನ್ನು ಪಕ್ಷವು ನಿಷೇಧಿಸುತ್ತದೆ.

ಶುದ್ಧ ರೂಪದ ಪ್ರಜಾಪ್ರಭುತ್ವದಲ್ಲಿ ನಮಗೆ ಬೇಕಿರುವುದು,
1. ಪ್ರಾಮಾಣಿಕ ಕೆಲಸಗಾರರು (ಅಭ್ಯರ್ಥಿಗಳು)…  
ಅವರು ಸಂಬಳಕ್ಕಾಗಿ ಕೆಲಸ ಮಾಡುವವರು.
2. ಪ್ರಾಮಾಣಿಕ ಮತದಾರರು (ಪ್ರಜೆಗಳು)… 
ಪ್ರಜಾಕೀಯ ಸಿದ್ಧಾಂತಕ್ಕೆ ಮಾತ್ರ ಮತ ಹಾಕುವವರು.

ನಾಯಕತ್ವ ಬಯಸುವವರು, ಸ್ವಪ್ರಚಾರ ಬಯಸುವವರು, ಹುದ್ದೆ -ಪದವಿ ಇಚ್ಚಿಸುವವರು, ಸಂಘಟನೆಯ ಮನೋಭಾವನೆ ಉಳ್ಳವರು ದಯವಿಟ್ಟು ಉತ್ತಮ ಪ್ರಜಾಕೀಯ ಪಕ್ಷದಿಂದ ದೂರವಿರಬೇಕಾಗಿ ವಿನಂತಿ.. | Posted on 24/Feb/2024 18:58:05

Upendra
Upendra

Check out the latest gallery of Upendra 37