Sheetal Shetty

Sheetal Shetty Instagram – ನೀನೊಂದು ಸುಂದರ ಪದ್ಯದಂತೆ
ಬರೆಯಲು ಕೂತಾಗ ಎಲ್ಲಿಂದ ಶುರು ಮಾಡೋದು ಎಲ್ಲಿ ಮುಗಿಸೋದು
ನಿನ್ನ ವರ್ಣಿಸಲು ಯಾವ ಪದವನ್ನ ಎಲ್ಲಿಡೋದು
ಆ ಕ್ಷಣಕ್ಕೆ ನನಗೆ ತಿಳಿಯೋದಿಲ್ಲ
ತಿಳಿದಿರೋದು ಒಂದೇ

ನೀನೊಂದು ಸುಂದರ ಪದ್ಯದಂತೆ

ಯಾವ ಸಾಲುಗಳು ನಿನಗೆ ಸಾಲುತ್ತವೆ
ಯಾವ ಸಾಲುಗಳು ಸಾಲೇ ಆಗದೆ ಸೋಲುತ್ತವೆ.
ಯಾವ ಶಬ್ಧ ನಿನ್ನಾಳ ಅಂತಾರಾಳಕ್ಕೆ ಹೋಲುತ್ತವೆ
ಯಾವ ನುಡಿ ಅಲ್ಲಿ ಅರ್ಥವೆ ಇಲ್ಲದೆ ಪೊಳ್ಳಾಗುತ್ತವೆ

ಪದ್ಯ ಬರೆಯೋ ನನಗೆ
ಆ ಕ್ಷಣಕ್ಕೆ ಅದು ತಿಳಿಯೋದಿಲ್ಲ

ತಿಳಿದಿರೋದು ಒಂದೇ
ನೀನೊಂದು ಸುಂದರ ಪದ್ಯದಂತೆ

ನೀ ಪದಗಳಿಂದ ಪದಗಳಿಗೆ
ನಿನಗೆ ಬೇಕಾದ ಹಾಗೆ ಸೇರಿಕೊಳ್ಳುತ್ತೀ
ಬರೆಯೋ ಬಡಜೀವಿ ನನ್ನ ಮಾತೆಲ್ಲಿ ಕೇಳುತ್ತೀ
ನನಗೇ ತಿಳಿಯದೇ ಸಾಲಾಗಿ ನಿನಗೆ ಬೇಕಾದ ಅರ್ಥ ಪಡೆಯುತ್ತೀ
ಸುಂದರ ಹಾಡಾಗೋದಕ್ಕೆ ಅಣಿಯಾಗುತ್ತೀ ..

ನೀನೊಂದು ಸುಂದರ ಪದ್ಯದಂತೆ
-ಶೀತಲಾಕ್ಷರ
..#Kannadasahithya
#bangalore
#kannadalitrature #kannadawritings #Kannadakavanagalu #mysore #loveyourself #karnataka | Posted on 13/Aug/2024 12:05:49

Sheetal Shetty
Sheetal Shetty

Check out the latest gallery of Sheetal Shetty