Sheetal Shetty Instagram – ಎಲ್ಲ ಬದುಕಿರುವ ಭಗವಂತರಿಗೆ ಸವಿನಯ ನಮಸ್ಕಾರ
ಸುಣ್ಣಕ್ಕೆ ಬೆಳ್ಳಗಾಗೋದಿಲ್ಲ ನಾನು
ಮಸಿಗೆ ಮಾಸೊದಿಲ್ಲ
ಹಾಗೂ ಹೀಗೋ ಕರಗಿ ಬಿಡೋದಕ್ಕೆ ನಾನು ಮಂಜುಗಡ್ಡೆಯಲ್ಲ
ಮುದುಡಿದರೂ ಕಂಪನೆರೆಯೋಕೆ ಮಲ್ಲಿಗೆನೂ ಅಲ್ಲ
ಹೆಪ್ಪಿಗೆ ಗಟ್ಟಿಯಾಗಿ ಕಡೆದರೆ ಬೆಣ್ಣೆಯಗೋದಕ್ಕೆ ನಾ ಹಾಲಲ್ಲ
ಭರ್ಜರಿ ಬಿಸಿಲಿಗೂ ತಂಪನೆರೆಯೋದಕ್ಕೆ ಕಲ್ಪವಂತೂ ಅಲ್ಲವೇ ಅಲ್ಲ.
ಎಲ್ಲವನ್ನು ನುಂಗಿಕೊಳ್ಳೋದಕ್ಕೆ ನಾನು ಸಮುದ್ರವು ಅಲ್ಲ
ಹಾಗೆ ತೇಲಿ ಹೋಗೋದಕ್ಕೆ ಮೋಡವು ಅಲ್ಲ
ಹಾ ಎಲ್ಲರಿಗೂ ಯಾವಾಗಲೂ ಒಳ್ಳೇದೇ ಮಾಡೋದಕ್ಕೆ ನಾನು ದೇವತೆಯಂತೂ ಅಲ್ಲವೇ ಅಲ್ಲ
ಎಲ್ಲ ಕೊಳಕು ನಾರುತ್ತಿರೋ ಜೀವಿಗಳಂತೆ ನಾನು ಒಬ್ಬಳು.
ನನ್ನ ಮನಸ್ಸಿನೊಳಗು ಪಿತಿ ಪಿತಿ ಎನ್ನುತ್ತಿರೋ ಒಂದಷ್ಟು ಜಂತುಗಳಿವೆ
ಹಾಗಾಗಿ ದೇವತಾಸಮಾನರು ನಮ್ಮನ್ನ ದೂರವೇ ಇಟ್ಟು ಅವರ ದೈವತ್ವ ಕಾಪಾಡಿಕೊಳ್ಳಿ ಅನ್ನೋ ಕಳಕಳಿಯ ಪ್ರಾರ್ಥನೆ…
-ಶೀತಲಾಕ್ಷರ – [sheetalshetty, sheetales, sheetalaakshara, poetry, metophors, kannada, bengaluru, Karnataka, kannadapoems, kannadaliterature,] | Posted on 28/Sep/2024 16:40:59